Home
***WELCOME TO TOWN MUNICIPAL COUNCIL SAUNDATTI WEBSITE ***
ಸವದತ್ತಿ ಪುರಸಭೆ ಬಗ್ಗೆ.
ಸವದತ್ತಿ ಯಲ್ಲಮ್ಮಾ ಪುರಸಭೆಯು ಸನ್ 1876 ನೇ ಇಸ್ವಿಯಲ್ಲಿ ಸ್ಥಾಪನೆಯಾಗಿದೆ. ಬೆಳಗಾವಿಯಿಂದ 83 ಕಿ.ಮೀ ಅಂತರದಲ್ಲಿದೆ. ಸವದತ್ತಿ ಕ್ರಿ.ಶ 930 ರಿಂದ 1236 ರ ವರೆಗೆ ರಟ್ಟ ಅರಸರ ರಾಜಧಾನಿಯಾಗಿತ್ತು. ಸವದತ್ತಿ ಪಟ್ಟಣದ ಪಶ್ಚಿಮಕ್ಕೆ ಐತಿಹಾಸಿಕ ಕೋಟೆ ಇದೆ. ಸವದತ್ತಿ ಪಟ್ಟಣದ 5 ಕಿ.ಮೀ ಅಂತರದಲ್ಲಿ ಐತಿಹಾಸಿಕ ಜಾಗೃತ ಶ್ರೀ ರೇಣುಕಾ ಯಲ್ಲಮ್ಮಾದೇವಿ ದೇವಸ್ಥಾನ, ಪರಶುರಾಮ ದೇವಸ್ಥಾನ ಜಮದಗ್ನಿ ದೇವಸ್ಥಾನವಿದೆ. ಶ್ರೀ ರೇಣುಕಾ ಯಲ್ಲಮ್ಮಾ ದೇವಸ್ಥಾನವು ಭಕ್ತಿಭಾವದ ಕೇಂದ್ರವಾಗಿದ್ದು,ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯದ ನಾನಾ ಪ್ರದೇಶಗಳಿಂದ ಅಪಾರ ಭಕ್ತರು ದೇವಿಯ ದರ್ಶನಕ್ಕೆ ಬರುತ್ತಾರೆ. ಸಾಕ್ಷರತೆಯ ಪ್ರಮಾಣವು ಶೇ.60.63% ರಷ್ಟಿದ್ದು ಮಹಿಳೆಯರ ಸಾಕ್ಷರತೆ ಪ್ರಮಾಣ ಶೇ.50.93% ಮತ್ತು ಪುರಷರ ಸಾಕ್ಷರತೆ ಪ್ರಮಾಣ 70.00% ರಷ್ಟು ಇರುತ್ತದೆ.
Brief about Saundatti Town.
Town Municipal Council Saundatti Yallamma is Constituted in 1876. It is Situated at distance of 83 Kms from belgaum. Saundatti is capital of Ratta (Emporar) in the period of 930 to 1230. Historical fort is situated on western part of the Town. 5 Kms from saundatti the holly pilgrim places goddess Shree Renuka Yallamma temple, Parsuram temple,Jamdagni temple. Shree Renuka Yellamma temple is the center of devotion & many devotees from Maharastra and Karanataka visit to take darashan goddess Yellamma. Average literacy rate is 60.63%. In this Male literacy rate is 70.00% & female literacy rate is 50.93%.
24X7 Helpline Public Grievance Redressal System Service Phone No 08330-224000
ಗಣಕೀಕರಣ: ಸವದತ್ತಿ ಯಲ್ಲಮ್ಮಾ ಪುರಸಭೆ ವ್ಯಾಪ್ತಿಯ ಸನ್ 1990 ನೇ ಸಾಲಿನಿಂದ ಇಲ್ಲಿವರೆಗೆ ಜನನ, ಮರಣ ಮತ್ತು ನಿರ್ಜೀವ ಜನನ ದಾಖಲೆಗಳನ್ನು ಗಣಕೀಕರಣಗೊಳಿಸಿದ್ದು ನಾಗರೀಕರು ಇನ್ನೂ ಮುಂದೆ ಜನನ, ಮರಣ ಪ್ರಮಾಣ ಪತ್ರಗಳನ್ನು ನಿಗದಿತ ಶುಲ್ಕ ಪಾವತಿಸಿ ಪಡೆಯಬಹುದು. ನಗರದ ಸಾರ್ವಜನಿಕರ ಕುಂದು ಕೊರತೆ ನಿವಾರಣೆಗಾಗಿ ಸಹಾಯವಾಣಿ ಘಟಕವನ್ನುನಿರ್ಮಿಸಿದ್ದು, ದಿನದ 24 ಗಂಟೆಗಳ ಕಾಲ ಕಾರ್ಯವನ್ನು ನಿರ್ವಹಿಸಲಾಗುತ್ತಿದೆ.
ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ (ಬರಗಾಲ) ಕುಡಿಯುವ ನೀರಿನ ತುರ್ತು ದುರಸ್ತಿ/ಸುಧಾರಣೆ ಕಾಮಗಾರಿಗಳ ಟೆಂಡರ.
ಫುರಸಭೆಯ ಸಾಮಾನ್ಯ ನಿಧಿಯಡಿ ವಿವಿಧ ಅಭಿವೃದ್ದಿ ಕಾಮಗಾರಿಗಳ ಅಲ್ಫಾವಧಿ ಟೆಂಡರ ಪ್ರಕಟಣೆ.
ಸನ್ 2011-12 ನೇ ಸಾಲಿನ ಎಸ್.ಎಫ್.ಸಿ 22.75% ಅನುದಾನದ ಟೆಂಡರ
ಪುರಸಭೆಯ ಸಾಮಾನ್ಯ ನಿಧಿ ಅಭಿವೃದ್ದಿ ಕಾಮಗಾರಿಗಳ ಟೆಂಡರ.
ಪುರಸಭೆಯ ಸನ್ 2012-13 ನೇ ಸಾಲಿನ ಆಯ-ವ್ಯಯ.
ಪುರಸಭೆಯ ಸಮುದಾಯಭವನದಲ್ಲಿ ರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು.
ಎಸ್.ಜೆ.ಎಸ್.ಆರ್.ವಾಯ್ ಯೋಜನೆಯಡಿಯಲ್ಲಿ STEP-UP ಘಟಕದಡಿ ಉಚಿತ ಕಂಪ್ಯೂಟರ ತರಬೇತಿಗೆ ಅರ್ಜಿ ಆಹ್ವಾನ.
"This Page is maintained by Shri B.R Mangasuli Chief Officer"
Update On: 08-05-2012

